Wednesday, August 05, 2009

ಗುಲ್ ಮೊಹರ್



ಬ್ಲಾಗ್ ಪ್ರಾರಂಭಿಸಬೇಕೆಂಬ ನನ್ನ ಬಯಕೆ ಬಹಳ ಹಳೆಯದು. ಕಳೆದ ಮೇ ತಿಂಗಳಲ್ಲಿ ಮೈಸೂರಿನ ಮಾನಸ ಗಂಗೋತ್ರಿಯ ಮುಂಜಾವಿನ ಪ್ರಶಾಂತ ವಾತಾವರಣದಲ್ಲಿ ಅಡ್ಡಾಡುತ್ತಿದ್ದಾಗ ಈ ದೃಶ್ಯ ಕಂಡು ಬಂತು. ಕ್ಯಾಮೆರಾದಲ್ಲಿ ಸೆರೆ ಹಿಡಿದೆ. ಈ ಪ್ರಕೃತಿ ಸೌಂದರ್ಯವನ್ನು ಎಲ್ಲರೊಡನೆ ಹಂಚಿಕೊಳ್ಳುವುದರ ಮೂಲಕವೇ ಬ್ಲಾಗನ್ನು ಪ್ರಾರಂಭಿಸಬಾರದೇಕೆ ಎನಿಸಿತು. ಅದರ ಪರಿಣಾಮವೇ ಇದು. ಮರಗಳಲ್ಲಿ ಗುಲ್ ಮೊಹರ್ ಹೂಗಳು ಅರಳಿರುವುದು ಎಷ್ಟು ಸುಂದರವಾಗಿದೆಯಲ್ಲವೇ?

2 comments:

Anil Jagalur said...

bahaLa chennaagide. ninna blaag aDe taDe illade muMduvariyali.

raghunandan said...

ಹೊಸ ಬ್ಲಾಗಿಗೆ ಶುಭಾಶಯಗಳು. ’ಎದೆ ತುಂಬಿ ಹಾಡುವೆನು’ ಹಾಡಿನಲ್ಲಿ ಎರಡು ಸಾಲುಗಳಿವೆ ’ಕೇಳುವಿರಿ ನೀವೆನಗೆ ಅದುವೆ ಬಹುಮಾನ’ ಮತ್ತು ’ಹಾಡುವುದು ಅನಿವಾರ್ಯ ಕರ್ಮನನಗೆ"
ಈ ಬ್ಲಾಗಿಗೂ ಅದೇ ಅನ್ವಯಿಸುತ್ತದೆ. ’ಓದುವಿರಿ ನೀವೆನಗೆ ಅದುವೆ ಬಹುಮಾನ’ ’ಬರೆಯುವುದು ಅನಿವಾರ್ಯ ಕರ್ಮ ನನಗೆ’. ಬರುತ್ತಾ ಬರುತ್ತಾ ಏನಾದರೊಂದು ಬರೆಯಲೇ ಬೇಕೆಂಬ ಒತ್ತಾಯ ತನಗೆ ತಾನೇ ಬಂದಾಗ, ಹುಚ್ಚು ಪೂರ್ತಿಹಿಡಿಯಿತೆಂದು ಅರ್ಥ.