Wednesday, September 28, 2011
Sunday, September 25, 2011
Saturday, September 24, 2011
Friday, September 23, 2011
ಹದಿನಾರು ಹಣ್ಣುಗಳ ಹಗರಣ



೭ ಎಪ್ರಿಲ್, ೨೦೦೫ - `ಸುಧಾ' ಹಾಸ್ಯ ಸಂಚಿಕೆಗಾಗಿ ಆಹ್ವಾನಿತ ಬರಹ.
ಇದು ನಿಜಕ್ಕೂ ನಡೆದ ಸಂಗತಿ. ಅಕ್ಷರಶಃ ನಿಜ. ನಮ್ಮ ಆತ್ಮೀಯ ಬಂಧುಗಳಾದ `ಮಂಜು, ಶ್ರೀನಿವಾಸ' ಅವರ ಅನುಭವದ ಕತೆ. ಇವರ ಪರಿಚಯವಿರುವವರಿಗೆ ಇದು ಹೆಚ್ಚು ಅರ್ಥ ಗರ್ಭಿತ ಬರಹವಾಗಬಹುದು. ಹಾಸ್ಯ ಸಂಚಿಕೆಗೆ ಬರೆಯಲು ಸೂಕ್ತ ಸಮಯದಲ್ಲಿ ನನಗೆ ದೊರೆತ ವಿಷಯ.
ಆದರೆ, ನಮ್ಮ `ಮಾಮಿ'ಯ ಗಾತ್ರ ನಿಜಕ್ಕೂ ಈ ವ್ಯಂಗ ಚಿತ್ರದಲ್ಲಿರುವ ಮಾಮಿಯ ಮೂರನೆಯ ಒಂದು ಭಾಗವಿರಬಹುದು ಅಷ್ಟೇ !
Thursday, September 22, 2011
ಪಂಡಿತ್ ದಿನಕರ್ ಕೈಕಿಣಿ

ಅತ್ಯುತ್ತಮ ರಚನಾಕಾರರೂ, ಅಪೂರ್ವ ಗಾಯಕರೂ ಆಗಿದ್ದ ಪಂಡಿತ್ ದಿನಕರ್ ಕೈಕಿಣಿ ಅವರ ೭೫ ನೆ ಹುಟ್ಟು ಹಬ್ಬದ ಸಂದರ್ಭದಲ್ಲಿ ಪ್ರಕಟವಾಗಿದ್ದ ಲೇಖನ ಇದು. ನನ್ನ ಮಕ್ಕಳಿಬ್ಬರ ಸಂಗೀತ ಗುರು ಶ್ರೀಮತಿ ಅದಿತಿ ಉಪಾಧ್ಯ ಅವರ ತಂದೆ ಹಾಗೂ ಗುರು ಇವರು. ಇದರಿಂದಾಗಿ ಅವರನ್ನು ಭೇಟಿಯಾಗುವ ಸುಸಂದರ್ಭವೂ ನಮಗೆ ಒದಗಿತ್ತು. ಅವರ ಸಂಗೀತವನ್ನು ಕೇಳುವುದು ಯಾರಿಗೇ ಆಗಲಿ ಒಂದು ಅದ್ಭುತ ಅನುಭವ.
ಕಳೆದ ವರ್ಷ, ಅಂದರೆ ೨೦೧೦ ರ ಜನವರಿಯಲ್ಲಿ ಅವರು ನಿಧನರಾದರು. ಇವರ ಮಕ್ಕಳು ಇವರ ಹೆಸರಿನಲ್ಲಿ `ಸ್ವರಿತ್' ಎಂಬ ಒಂದು ಟ್ರಸ್ಟ್ ಅನ್ನು ಪ್ರಾರಂಭಿಸಿದ್ದಾರೆ. ಇದೇ ಅಕ್ಟೋಬರ್ ತಿಂಗಳಲ್ಲಿ ಅವರ ೮೦ನೆಯ ಹುಟ್ಟು ಹಬ್ಬದ ಪ್ರಯುಕ್ತ ಅವರ ಬಗ್ಗೆ ಒಂದು documentary ಚಿತ್ರವನ್ನು ಸ್ವರಿತ್ , ಮುಂಬೈನಲ್ಲಿ ಬಿಡುಗಡೆ ಮಾಡಲಿದೆ. ಅವರ ಸಂಗೀತವನ್ನು ಸಿಡಿ ರೂಪದಲ್ಲಿ ಹೊರತರುವ ಯೋಜನೆ ಸಹ ಹಾಕಿಕೊಂಡಿದೆ.
Wednesday, September 21, 2011
Tuesday, September 20, 2011
ಗುಳಿಗಳು ಮತ್ತು ಡೆಡ್ಲೈನ್
೧೯೯೮ ರಲ್ಲಿ ಹುಚ್ಚಪ್ಪ ಎಂಬುವರು ಬೆಂಗಳೂರಿನ ಮೇಯರ್ ಆಗಿದ್ದಾಗ, ಒಂದು ಹೇಳಿಕೆ ನೀಡಿದರು : ಒಂದು ತಿಂಗಳೋ ಏನೋ `ಡೆಡ್ ಲೈನ್' ಹಾಕಿಕೊಂಡು, ಬೆಂಗಳೂರು ನಗರದ ರಸ್ತೆಗಳ ಗುಳಿಗಳನ್ನೆಲ್ಲ ಮುಚ್ಚಿಸಿಬಿಡುತ್ತೇನೆ ಎಂದು. ಇದು ಅಸಾಧ್ಯ ಎಂಬುದು ಅವರಿಗೂ ಗೊತ್ತಿತ್ತು, ಜನಗಳಿಗೂ ಗೊತ್ತಿತ್ತು. ಇದೇ ಸಂದರ್ಭದಲ್ಲಿ ಲಾಲೂ ಪ್ರಸಾದ್ ಯಾದವ್, ಬಿಹಾರದ ರಸ್ತೆಗಳನ್ನೆಲ್ಲ `ಹೇಮಾಮಾಲಿನಿಯ ಕೆನ್ನೆಗಳಷ್ಟು' ನುಣುಪು ಮಾಡುವುದಾಗಿ ಘೋಷಿಸಿದ್ದರು. ಇವುಗಳಿಂದ ಪ್ರೇರಿತಳಾಗಿ ಬರೆದ ಹಾಸ್ಯ ಲೇಖನ ಇದು.
(ನವೆಂಬರ್ ೨೮, ೧೯೯೮)

(ನವೆಂಬರ್ ೨೮, ೧೯೯೮)

Monday, September 19, 2011
ಹಾವಿನ ಹುತ್ತ
ಬೆಂಗಳೂರಿನ IISc campus ನಲ್ಲಿ ಈ ಹುತ್ತ ಕಂಡುಬರುತ್ತದೆ. ಸುಮಾರು ಆರು ಅಡಿಗೂ ಎತ್ತರದ ಹುತ್ತ ಇದು. ಇದನ್ನು ಅಲ್ಲಿ ಸಂರಕ್ಷಿಸಲಾಗಿದೆ. ಇದರಲ್ಲಿ ಹಾವುಗಳಿವೇಯೋ ಇಲ್ಲವೋ ತಿಳಿಯದು. ಆದರೆ ಕ್ಯಾಂಪಸ್ ನಲ್ಲಿ ಮಾತ್ರ ಹಾವುಗಳು ಹೇರಳವಾಗಿವೆ.
ನಾವು ಸಣ್ಣವರಿದ್ದಾಗ ಹುತ್ತಗಳು ಬೇಕಾದ ಹಾಗೆ ಕಣ್ಣಿಗೆ ಬೀಳುತ್ತಿದ್ದವು. ಆದರೆ ಈಗ ನಗರಗಳು ಬೆಳೆದಂತೆ ಇವು ಕಾಣೆಯಾಗುತ್ತಿವೆ. ಇಂದಿನ ಪೀಳಿಗೆಯ ನಗರವಾಸಿ ಮಕ್ಕಳಿಗೆ ಹುತ್ತ ಎಂದರೆ ಏನು, ಅದು ಹೇಗಿರುತ್ತದೆ ಎಂಬುದನ್ನು ಚಿತ್ರ ತೋರಿಸಿ ವಿವರಿಸಬೇಕಾಗುತ್ತದೆ. ಅಂತಹದರಲ್ಲಿ ಜನಸಂದಣಿ, ಟ್ರಾಫಿಕ್ ಗದ್ದಲ ಇರುವ ನಗರದಲ್ಲಿ, ಅದರ ಹೃದಯ ಭಾಗದಲ್ಲಿರುವ ಈ ಕ್ಯಾಂಪಸ್ಸಿನಲ್ಲಿ ಈ ಹುತ್ತ ಕಂಡುಬರುವುದು ಒಂದು ವೈಶಿಷ್ಟ್ಯ.
Sunday, September 18, 2011
ಅಣಬೆ
ಒಂದು ಬೆಳಿಗ್ಯೆ ನಮ್ಮ ತೋಟದಲ್ಲಿ ಇದ್ದಕ್ಕಿದ್ದಂತೆ ಈ ಅಣಬೆ ಕಂಡು ಬಂತು! ಕೇವಲ ಎರಡು ಮೂರು ದಿನದ ಹಿಂದೆ ಕಂಡು ಬಂದಿರಲಿಲ್ಲ. ಸುಮಾರು ಮೂರು ಇಂಚು ಎತ್ತರದಲ್ಲಿದ್ದ, ನಾಲ್ಕೈದು ಇಂಚು ವ್ಯಾಸ ಉಳ್ಳ ಅಣಬೆ ಇದು. ಈ ಗಾತ್ರದ ಅಣಬೆಯನ್ನು ನಾನು ನೋಡಿಯೇ ಇರಲಿಲ್ಲ. ಇದರ ಬಣ್ಣ ಸಹ ಅಪರೂಪವೇ. ನೋಡಿದಾಕ್ಷಣ ಫೋಟೋ ಹಿಡಿದೆ. ಸುಮಾರು ದಿವಸ ಇದು ಹಾಗೆಯೇ ಇತ್ತು. ಮತ್ತೆ ಒಂದ್ನಾಲ್ಕು ದಿನಗಳ ಬಳಿಕ ಹೋಗಿ ನೋಡಿದರೆ ಅದು ನಾಪತ್ತೆ! ಅದರ ಕುರುಹೂ ಇರಲಿಲ್ಲ. ಏನಾಯಿತೋ ಗೊತ್ತಾಗಲಿಲ್ಲ.
Friday, September 16, 2011
ಚಂದ್ರ ಭೂಮಿಗೆ ಅತಿ ಸನಿಹಕ್ಕೆ ಬಂದಾಗ
The moon comes closest to the earth in 19 years on 19th March 2011. The picture of the `Supermoon' taken in the IISc Campus, Bangalore.

Thursday, September 15, 2011
ರಾಜ್ಯೋತ್ಸವವನ್ನು ಕನ್ನಡದಲ್ಲೇ ಆಚರಿಸಬೇಕೆ?
`ಸುಧಾ ' ಪತ್ರಿಕೆಯ ಈ ಸಂಚಿಕೆಯ ವಿಶೇಷವೆಂದರೆ, ನನ್ನ ಲೇಖನದ ಜೊತೆ ನನ್ನ ಮಗಳ ಲೇಖನವೂ ಇದರಲ್ಲಿ ಪ್ರಕಟವಾಗಿರುವುದು. ಎರಡನ್ನೂ ಇಲ್ಲಿ ಪ್ರಕಟಿಸಿದ್ದೇನೆ. ಇವು ಪ್ರಕಟವಾದ ಸಂದರ್ಭ, ಕನ್ನಡ ರಾಜ್ಯೋತ್ಸವ.
ನನ್ನ ಪತಿ ಕೆಲಸ ಮಾಡುತ್ತಿದ್ದ ಕಂಪೆನಿಯ ಕ್ವಾರ್ಟರ್ಸಿನಲ್ಲಿ ನಾವು ವಾಸಿಸುತ್ತಿದ್ದಾಗ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದೆವು. ಈ ಸಂದರ್ಭದಲ್ಲಿ, ಅಲ್ಲಿನ ನಿವಾಸಿಗಳಿಗೆ ವೃಂದಗಾನ ತರಬೇತಿ ನೀಡಿ ಹಾಡಿಸುವ ಕೆಲಸ ನನ್ನ ಪಾಲಿನದಾಗಿರುತ್ತಿತ್ತು. ಆಗ ನಡೆದ ನೈಜ ಸಂಗತಿಗಳಿವು. ಸ್ವಲ್ಪವೂ ಉತ್ಪ್ರೇಕ್ಷೆ ಇಲ್ಲ. ಹೆಸರುಗಳನ್ನು ಬದಲಿಸಿ ಬರೆದ ಹಾಸ್ಯ ಲೇಖನ ಇದು.
ನವೆಂಬರ್ ೭, ೨೦೦೦



ನನ್ನ ಮಗಳು ತಮಿಳು ನಾಡಿನ ತಿರುಚಿಯಲ್ಲಿ ಓದುತ್ತಿದ್ದಾಗ ಬರೆದ ಲೇಖನ ಇದು. ನಮ್ಮ ನಾಡನ್ನು ಬಿಟ್ಟು ಹೋದಾಗ ನಮ್ಮ ಭಾಷೆ ಕಿವಿಗೆ ಬೀಳದಿದ್ದಾಗ ಅವಳಿಗೆ ಬಹಳ ಕಸಿವಿಸಿ ಆಗುತ್ತಿತ್ತು. ಅವಳು ಕನ್ನಡವನ್ನು ಹೆಚ್ಚಾಗಿ ಓದಲು ಪ್ರಾರಂಭಿಸಿದ್ದು ಅಲ್ಲಿಗೆ ಹೋದ ಮೇಲೆಯೇ.
ನನ್ನ ಪತಿ ಕೆಲಸ ಮಾಡುತ್ತಿದ್ದ ಕಂಪೆನಿಯ ಕ್ವಾರ್ಟರ್ಸಿನಲ್ಲಿ ನಾವು ವಾಸಿಸುತ್ತಿದ್ದಾಗ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದೆವು. ಈ ಸಂದರ್ಭದಲ್ಲಿ, ಅಲ್ಲಿನ ನಿವಾಸಿಗಳಿಗೆ ವೃಂದಗಾನ ತರಬೇತಿ ನೀಡಿ ಹಾಡಿಸುವ ಕೆಲಸ ನನ್ನ ಪಾಲಿನದಾಗಿರುತ್ತಿತ್ತು. ಆಗ ನಡೆದ ನೈಜ ಸಂಗತಿಗಳಿವು. ಸ್ವಲ್ಪವೂ ಉತ್ಪ್ರೇಕ್ಷೆ ಇಲ್ಲ. ಹೆಸರುಗಳನ್ನು ಬದಲಿಸಿ ಬರೆದ ಹಾಸ್ಯ ಲೇಖನ ಇದು.
ನವೆಂಬರ್ ೭, ೨೦೦೦



ನನ್ನ ಮಗಳು ತಮಿಳು ನಾಡಿನ ತಿರುಚಿಯಲ್ಲಿ ಓದುತ್ತಿದ್ದಾಗ ಬರೆದ ಲೇಖನ ಇದು. ನಮ್ಮ ನಾಡನ್ನು ಬಿಟ್ಟು ಹೋದಾಗ ನಮ್ಮ ಭಾಷೆ ಕಿವಿಗೆ ಬೀಳದಿದ್ದಾಗ ಅವಳಿಗೆ ಬಹಳ ಕಸಿವಿಸಿ ಆಗುತ್ತಿತ್ತು. ಅವಳು ಕನ್ನಡವನ್ನು ಹೆಚ್ಚಾಗಿ ಓದಲು ಪ್ರಾರಂಭಿಸಿದ್ದು ಅಲ್ಲಿಗೆ ಹೋದ ಮೇಲೆಯೇ.
ಫ್ರೀ ಫ್ರೀ ಫ್ರೀ ............
Wednesday, September 14, 2011
Saturday, September 10, 2011
Subscribe to:
Comments (Atom)































