Tuesday, September 20, 2011

ಗುಳಿಗಳು ಮತ್ತು ಡೆಡ್ಲೈನ್

೧೯೯೮ ರಲ್ಲಿ ಹುಚ್ಚಪ್ಪ ಎಂಬುವರು ಬೆಂಗಳೂರಿನ ಮೇಯರ್ ಆಗಿದ್ದಾಗ, ಒಂದು ಹೇಳಿಕೆ ನೀಡಿದರು : ಒಂದು ತಿಂಗಳೋ ಏನೋ `ಡೆಡ್ ಲೈನ್' ಹಾಕಿಕೊಂಡು, ಬೆಂಗಳೂರು ನಗರದ ರಸ್ತೆಗಳ ಗುಳಿಗಳನ್ನೆಲ್ಲ ಮುಚ್ಚಿಸಿಬಿಡುತ್ತೇನೆ ಎಂದು. ಇದು ಅಸಾಧ್ಯ ಎಂಬುದು ಅವರಿಗೂ ಗೊತ್ತಿತ್ತು, ಜನಗಳಿಗೂ ಗೊತ್ತಿತ್ತು. ಇದೇ ಸಂದರ್ಭದಲ್ಲಿ ಲಾಲೂ ಪ್ರಸಾದ್ ಯಾದವ್, ಬಿಹಾರದ ರಸ್ತೆಗಳನ್ನೆಲ್ಲ `ಹೇಮಾಮಾಲಿನಿಯ ಕೆನ್ನೆಗಳಷ್ಟು' ನುಣುಪು ಮಾಡುವುದಾಗಿ ಘೋಷಿಸಿದ್ದರು. ಇವುಗಳಿಂದ ಪ್ರೇರಿತಳಾಗಿ ಬರೆದ ಹಾಸ್ಯ ಲೇಖನ ಇದು.

(ನವೆಂಬರ್
೨೮, ೧೯೯೮)


Monday, September 19, 2011

ಹಾವಿನ ಹುತ್ತ


ಬೆಂಗಳೂರಿನ IISc campus ನಲ್ಲಿ ಈ ಹುತ್ತ ಕಂಡುಬರುತ್ತದೆ. ಸುಮಾರು ಆರು ಅಡಿಗೂ ಎತ್ತರದ ಹುತ್ತ ಇದು. ಇದನ್ನು ಅಲ್ಲಿ ಸಂರಕ್ಷಿಸಲಾಗಿದೆ. ಇದರಲ್ಲಿ ಹಾವುಗಳಿವೇಯೋ ಇಲ್ಲವೋ ತಿಳಿಯದು. ಆದರೆ ಕ್ಯಾಂಪಸ್ ನಲ್ಲಿ ಮಾತ್ರ ಹಾವುಗಳು ಹೇರಳವಾಗಿವೆ.

ನಾವು ಸಣ್ಣವರಿದ್ದಾಗ ಹುತ್ತಗಳು ಬೇಕಾದ ಹಾಗೆ ಕಣ್ಣಿಗೆ ಬೀಳುತ್ತಿದ್ದವು. ಆದರೆ ಈಗ ನಗರಗಳು ಬೆಳೆದಂತೆ ಇವು ಕಾಣೆಯಾಗುತ್ತಿವೆ. ಇಂದಿನ ಪೀಳಿಗೆಯ ನಗರವಾಸಿ ಮಕ್ಕಳಿಗೆ ಹುತ್ತ ಎಂದರೆ ಏನು, ಅದು ಹೇಗಿರುತ್ತದೆ ಎಂಬುದನ್ನು ಚಿತ್ರ ತೋರಿಸಿ ವಿವರಿಸಬೇಕಾಗುತ್ತದೆ. ಅಂತಹದರಲ್ಲಿ ಜನಸಂದಣಿ, ಟ್ರಾಫಿಕ್ ಗದ್ದಲ ಇರುವ ನಗರದಲ್ಲಿ, ಅದರ ಹೃದಯ ಭಾಗದಲ್ಲಿರುವ ಈ ಕ್ಯಾಂಪಸ್ಸಿನಲ್ಲಿ ಈ ಹುತ್ತ ಕಂಡುಬರುವುದು ಒಂದು ವೈಶಿಷ್ಟ್ಯ.

ಶಿಕ್ಷಣ ಮಕ್ಕಳಿಗೆ ಶಿಕ್ಷೆಯಾಗದಿರಲಿ

ಜೂನ್ ೧, 2000

Sunday, September 18, 2011

ಅಣಬೆ


ಒಂದು ಬೆಳಿಗ್ಯೆ ನಮ್ಮ ತೋಟದಲ್ಲಿ ಇದ್ದಕ್ಕಿದ್ದಂತೆ ಈ ಅಣಬೆ ಕಂಡು ಬಂತು! ಕೇವಲ ಎರಡು ಮೂರು ದಿನದ ಹಿಂದೆ ಕಂಡು ಬಂದಿರಲಿಲ್ಲ. ಸುಮಾರು ಮೂರು ಇಂಚು ಎತ್ತರದಲ್ಲಿದ್ದ, ನಾಲ್ಕೈದು ಇಂಚು ವ್ಯಾಸ ಉಳ್ಳ ಅಣಬೆ ಇದು. ಈ ಗಾತ್ರದ ಅಣಬೆಯನ್ನು ನಾನು ನೋಡಿಯೇ ಇರಲಿಲ್ಲ. ಇದರ ಬಣ್ಣ ಸಹ ಅಪರೂಪವೇ. ನೋಡಿದಾಕ್ಷಣ ಫೋಟೋ ಹಿಡಿದೆ. ಸುಮಾರು ದಿವಸ ಇದು ಹಾಗೆಯೇ ಇತ್ತು. ಮತ್ತೆ ಒಂದ್ನಾಲ್ಕು ದಿನಗಳ ಬಳಿಕ ಹೋಗಿ ನೋಡಿದರೆ ಅದು ನಾಪತ್ತೆ! ಅದರ ಕುರುಹೂ ಇರಲಿಲ್ಲ. ಏನಾಯಿತೋ ಗೊತ್ತಾಗಲಿಲ್ಲ.

Thursday, September 15, 2011

ರಾಜ್ಯೋತ್ಸವವನ್ನು ಕನ್ನಡದಲ್ಲೇ ಆಚರಿಸಬೇಕೆ?

`ಸುಧಾ ' ಪತ್ರಿಕೆಯ ಈ ಸಂಚಿಕೆಯ ವಿಶೇಷವೆಂದರೆ, ನನ್ನ ಲೇಖನದ ಜೊತೆ ನನ್ನ ಮಗಳ ಲೇಖನವೂ ಇದರಲ್ಲಿ ಪ್ರಕಟವಾಗಿರುವುದು. ಎರಡನ್ನೂ ಇಲ್ಲಿ ಪ್ರಕಟಿಸಿದ್ದೇನೆ. ಇವು ಪ್ರಕಟವಾದ ಸಂದರ್ಭ, ಕನ್ನಡ ರಾಜ್ಯೋತ್ಸವ.

ನನ್ನ ಪತಿ ಕೆಲಸ ಮಾಡುತ್ತಿದ್ದ ಕಂಪೆನಿಯ ಕ್ವಾರ್ಟರ್ಸಿನಲ್ಲಿ ನಾವು ವಾಸಿಸುತ್ತಿದ್ದಾಗ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದೆವು. ಈ ಸಂದರ್ಭದಲ್ಲಿ, ಅಲ್ಲಿನ ನಿವಾಸಿಗಳಿಗೆ ವೃಂದಗಾನ ತರಬೇತಿ ನೀಡಿ ಹಾಡಿಸುವ ಕೆಲಸ ನನ್ನ ಪಾಲಿನದಾಗಿರುತ್ತಿತ್ತು. ಆಗ ನಡೆದ ನೈಜ ಸಂಗತಿಗಳಿವು. ಸ್ವಲ್ಪವೂ ಉತ್ಪ್ರೇಕ್ಷೆ ಇಲ್ಲ. ಹೆಸರುಗಳನ್ನು ಬದಲಿಸಿ ಬರೆದ ಹಾಸ್ಯ ಲೇಖನ ಇದು.

ನವೆಂಬರ್ ೭, ೨೦೦೦

































ನನ್ನ ಮಗಳು ತಮಿಳು ನಾಡಿನ ತಿರುಚಿಯಲ್ಲಿ ಓದುತ್ತಿದ್ದಾಗ ಬರೆದ ಲೇಖನ ಇದು. ನಮ್ಮ ನಾಡನ್ನು ಬಿಟ್ಟು ಹೋದಾಗ ನಮ್ಮ ಭಾಷೆ ಕಿವಿಗೆ ಬೀಳದಿದ್ದಾಗ ಅವಳಿಗೆ ಬಹಳ ಕಸಿವಿಸಿ ಆಗುತ್ತಿತ್ತು. ಅವಳು ಕನ್ನಡವನ್ನು ಹೆಚ್ಚಾಗಿ ಓದಲು ಪ್ರಾರಂಭಿಸಿದ್ದು ಅಲ್ಲಿಗೆ ಹೋದ ಮೇಲೆಯೇ.

ಫ್ರೀ ಫ್ರೀ ಫ್ರೀ ............

ಈ ಹಾಸ್ಯ ಲೇಖನದಲ್ಲಿ, ಒಂದು ಸಂದರ್ಭದ ಬಗ್ಗೆ ಮಾತ್ರ ಮೊದಲೇ ಹೇಳಬೇಕಾಗುತ್ತದೆ. ನಟ ರಾಜಕುಮಾರ್ ನನ್ನು ವೀರಪ್ಪನ್ ಹಿಡಿದು ಕಾಡಿಗೆ ಕರೆದುಕೊಂಡು ಹೋಗಿ ಇಟ್ಟುಕೊಂಡಿದ್ದ ಸಂದರ್ಭದಲ್ಲಿ ಬರೆದದ್ದು. ಲೇಖನದ ಕೊನೆಯಲ್ಲಿ ಇದರ ಬಗ್ಗೆ ಪ್ರಸ್ತಾವವಿದೆ. ಅದು ಹಳೆಯ ವಿಷಯವಾದ್ದರಿಂದ, ಈಗ ಓದುವವರಿಗೆ ಅದು ಅರ್ಥವಾಗಲಾರದೆಂದು ಇದನ್ನು ಸೂಚಿಸಿದ್ದೇನೆ.

ನವೆಂಬರ್ ೨, ೨೦೦೦


ಶಿಕ್ಷಣ ಮಕ್ಕಳಿಗೆ ಶಿಕ್ಷೆಯಾಗದಿರಲಿ

ಜೂನ್ ೧, 2000

ಭವಿಷ್ಯದ ಮುಖ್ಯ ಶಕ್ತಿಯಾಗಿ ಜೈವಿಕ ರಾಶಿ(BIO ENERGY)














ನವೆಂಬರ್ ೨೫, 1999

Saturday, September 10, 2011

ಇಂಧನ ಕೋಶ (Fuel Cell)

ಸುಧಾ ವಾರ ಪತ್ರಿಕೆ
೨೧ನೆ ಸೆಪ್ಟೆಂಬರ್ ೧೯೯೭

Thursday, October 22, 2009

ನಾರ್ಮಲ್ ಯಾವುದು, ಅಬ್ನಾರ್ಮಲ್ ಯಾವುದು?

ಸಾಧಾರಣವಾಗಿ ಸಮಾಜದಲ್ಲಿ ಜನರ ಒಂದು ರೀತಿಯ ನಡೆವಳಿಕೆಯು `ನಾರ್ಮಲ್' ಎನ್ನಿಸಿಕೊಳ್ಳುತ್ತದೆ. ಜನರ ನಿರೀಕ್ಷೆಗಿಂತ ಸ್ವಲ್ಪ ವ್ಯತ್ಯಾಸವಿರುವ ವರ್ತನೆಯನ್ನು ಸಮಾಜ `ಅಪಸಾಮಾನ್ಯ' ಅಥವಾ `ಅಬ್ನಾರ್ಮಲ್' ಎಂದು ಪರಿಗಣಿಸುತ್ತದೆ . ಉದಾಹರಣಿಗೆ ಬೆಂಗಳೂರು ಮಹಾನಗರದಲ್ಲಿ ಅನೇಕ ವೇಳೆ ಆಟೋಗಳಲ್ಲಿ ಓಡಾಡುವ ನನಗೆ ಆಟೋ ಚಾಲಕರು ಬಿ ಪಿ ಏರಿಸಿದರೆ ಅದು ನಾರ್ಮಲ್ ವರ್ತನೆ ಆಗುತ್ತದೆ. ಆದರೆ ಕೆಲವೊಮ್ಮೆ ಬಿ ಪಿ ಏರಿಸದ, ಹಾಗೂ ಬಹಳ ಅಪರೂಪಕ್ಕೊಮ್ಮೆ ಸ್ನೇಹಪರನೂ ಆದ ಚಾಲಕ ಸಿಕ್ಕರೆ, ನಾನು ತಮಾಷೆಗಾಗಿ, ಆದರೆ ಸಂತೋಷದಿಂದಲೇ ಆತನ ವರ್ತನೆಯನ್ನು ಕರೆಯುವುದು `ಅಬ್ನಾರ್ಮಲ್' ಎಂದು !

ನನ್ನ ಕೆಲವು ಅನುಭವಗಳ ಉದಾಹರಣೆ ಇಲ್ಲಿವೆ ನೋಡಿ.

ಸುಮಾರು ಹತ್ತು ವರ್ಷಗಳ ಹಿಂದೆ ನಾನು, ನನ್ನ ತಂಗಿ ಹಾಗೂ ಮಗಳು ಒಂದು ಆಟೋ ಹತ್ತಿದೆವು. ಅದು ಅತಿಯಾದ ವೇಗದಲ್ಲಿ ಇಳಿಜಾರಿನಲ್ಲಿ ಹೋಗುತ್ತಿದ್ದಾಗ ಬ್ರೇಕ್ ಹಾಳಾಯಿತು. ದಿಕ್ಕೇ ತೋಚದೆ ಮುನ್ನುಗ್ಗಿ ಹೋಗಿ, ಸಿಗ್ಲಲ್ಲಿನಲ್ಲಿ ನಿಂತಿದ್ದ ಕಾರೊಂದಕ್ಕೆ ಡಿಕ್ಕಿ ಹೊಡೆದ ಆಟೋ ಉರುಳಿಕೊಂಡು , ನಾವೆಲ್ಲರೂ ಕೆಳಗೆ ಬಿದ್ದೆವು. ಸಾಕಷ್ಟು ಪೆತ್ತಾಗಿದ್ದರೂ ಬೇಗನೆ ಚೇತರಿಸಿಕೊಂಡೆವು. ಅಂದಿನಿಂದ ನನಗೆ ಆಟೋ ವೇಗ ಸ್ವಲ್ಪ ಹೆಚ್ಚಾದರೂ ಪ್ರಾಣಭಯ. ಕೂಡಲೇ ಹೇಳುತ್ತೇನೆ, "ಸ್ವಲ್ಪ ನಿಧಾನಕ್ಕೆ ಓಡಿಸಪ್ಪಾ" ಅಂತ. ಇದಕ್ಕೆ ಸಿಕ್ಕಿರುವ ಪ್ರತಿಕ್ರಿಯೆಗಳು ಹಲವಾರು ಬಗೆ.

`ಏನ್ ಮೇಡಂ, ಸ್ಪೀಡ್ ಅಂದ್ರೆ ಭಯಾನಾ?' - ಹಾಸ್ಯ ಹಾಗೂ ಅಸಡ್ಡೆಯ ಪ್ರಶ್ನೆ. ವೇಗ ಯಥಾಪ್ರಕಾರ.
`ಜೀವ ಅಂದ್ರೆ ಅಷ್ಟೊಂದು ಆಸೆ ಇಟ್ಕೊಂಡಿರಬಾರದು ಮೇಡಂ' - ಜೀವನಕ್ಕೊಂದು ಉಪದೇಶ !!!!!!!!
`ಸರಿ ಹೋಯ್ತು ಮೇಡಂ, ನಿಮ್ಮಂತಹವರ ಮಾತು ಕೇಳಿದರೆ, ಎಂಟು ಆಗೋ ಕಡೆ ನಾಲ್ಕೇ ಬಾಡಿಗೆ ಆಗತ್ತೆ. ನಾವು ಮಕ್ಕಳು ಮರಿನ ಹೇಗೆ ಸಾಕಬೇಕು?' - ಕ್ರೋಧಭರಿತ ಪ್ರಶ್ನೆ
`ಡರ್ರ್....................................' ವೇಗ ಯಥಾಸ್ಥಿತಿ, ಜಾಣ ಕಿವುಡು.

ಕಳೆದ ವಾರ ಆರೋಗ್ಯ ತಪಾಸಣೆಗೆಂದು ಆಸ್ಪತ್ರೆಯೊಂದಕ್ಕೆ ಹೋಗಲು ಆಟೋ ಹಿಡಿದೆ. ಯಥಾಪ್ರಕಾರ ಹೇಳಿದೆ, `ನಿಧಾನವಾಗಿ ಓಡಿಸಪ್ಪಾ.....' ಅಂತ. ಅವನು ವೇಗವನ್ನು ತೀರ ಅತಿಯಾಗಿ ಕಡಿಮೆ ಮಾಡಿದ್ದಲ್ಲದೆ, ಸಿಗ್ನಲ್ ಬಳಿ ನಿಂತಾಗ, `ಸ್ಪೀಡ್ ಸಾಕೋ, ಇನ್ನೂ ಕಡಿಮೆ ಮಾಡಲೋ ಮೇಡಂ?' ಅಂದ!! ನಾನು `ಇಲ್ಲಪ್ಪಾ, ಇನ್ನು ಸ್ವಲ್ಪ ಹೆಚ್ಚೇ ಮಾಡು ಪರವಾಗಿಲ್ಲ' ಅಂದೇ. `ಸರಿ ಮೇಡಂ, ಮುವ್ವತ್ತೈದರಿಂದ ಇಪ್ಪತ್ತೈದಕ್ಕೆ ಇಳಿಸಿದ್ದೆ. ಮುವ್ವತ್ತಕ್ಕೆ ಹೋಗ್ಲ ಮೇಡಂ?' ಅಂದ. ನಂಬುವುದಕ್ಕೇ ಆಗಲಿಲ್ಲ. ಆಸ್ಪತ್ರೆ ತಲುಪಿದ ಮೇಲೆ, ನಾನು ಅವನಿಗೆ ಧನ್ಯವಾದ ತಿಳಿಸಿದ್ದಲ್ಲದೆ ಮೇಲಿನ ಉದಾಹರಣೆಗಳನ್ನು ಹೇಳಿ, `ನೋಡಪ್ಪ, ಹೀಗೆ ಉತ್ತರ ಕೊಡ್ತಾರೆ, ಎಷ್ಟು ಜೋಪಾನವಾಗಿ ಕರೆದುಕೊಂಡು ಬಂದಿ' ಎಂದೆ. ಅವನ ಉತ್ತರ ಏನಿತ್ತು ಗೊತ್ತೇ? `ಏನೋ ತೊಂದ್ರೆ ಇರೋದ್ರಿಂದಲೇ ನೀವು ಹಾಗೆ ಹೇಳಿರಬೇಕು ಆಲ್ವಾ ಮೇಡಂ?' ಎಂದು. ಇಂತಹ ವರ್ತನೆ (ನಾರ್ಮಲ್ ? ಅಥವಾ ಅಬ್ನಾರ್ಮಲ್?) ಅಭ್ಯಾಸವೇ ಇಲ್ಲದ ನನಗೆ ಕನಸು ಅಲ್ಲ ತಾನೇ ಎನಿಸಿ, ಕೈ ಚಿವುಟಿ ನೋಡಿಕೊಳ್ಳುವಂತಾಯಿತು ! ಮೀಟರಿಗಿಂತ ಒಂದೈದು ರೂಪಾಯಿ ಹೆಚ್ಚಾಗಿಯೇ ಕೊಟ್ಟು, ಮತ್ತೆ ಧನ್ಯವಾದಗಳನ್ನು ಹೇಳಿ ಬಂದೆ.

ನಮಗೆ ಬೇಕಾಗಿರುವುದು ಇಂತಹ ಸುಸಂಸ್ಕೃತ ವರ್ತನೆ ಅಷ್ಟೆ ಅಲ್ಲವೇ?

Thursday, September 03, 2009

ಕನ್ನಡ ಎನೆ.........

ಸುಧಾ' ಹಾಗೂ `ಪ್ರಜಾವಾಣಿ' ಪತ್ರಿಕೆಗಳಲ್ಲಿ ಆಗಾಗ್ಗೆ ಪ್ರಕಟವಾಗುವ ನನ್ನ ಇತ್ತೀಚಿನ ಲೇಖನಗಳನ್ನು ಓದುವ ನನ್ನ ಕೆಲವು ಸ್ನೇಹಿತರು, ಹಿಂದಿನಿಂದಲೂ ಪ್ರಕಟವಾಗಿಕೊಂಡು ಬಂದಿರುವ ನನ್ನ ಹಳೆಯ ಲೇಖನಗಳನ್ನು ಓದುವ ಆಸಕ್ತಿ ವ್ಯಕ್ತಪಡಿಸಿದ್ದರು. ಅವನ್ನು ಅವರಿಗೆ ಈ ಮೂಲಕವೇ ಏಕೆ ನೀಡಬಾರದೆಂಬ ಯೋಚನೆ ಬಂತು. ಆದ್ದರಿಂದಲೇ, `ಸುಧಾ' ವಾರಪತ್ರಿಕೆಯಲ್ಲಿ ೧೯೯೫ರ ಸೆಪ್ಟೆಂಬರ್ ತಿಂಗಳ ೧೭ನೆ ತಾರೀಕಿನಂದು, ಅಂದರೆ ಸರಿಯಾಗಿ ಹದಿನಾಲ್ಕು ವರ್ಷಗಳ ಹಿಂದೆ ಪ್ರಕಟವಾದ ನನ್ನ ಮೊತ್ತ ಮೊದಲನೆಯ ಹಾಸ್ಯ ಲೇಖನವನ್ನು ಈ ಮೂಲಕ ನೀಡುತ್ತಿದ್ದೇನೆ.
`ಸುಧಾ' ಪ್ರಾರಂಭವಾದಂದಿನಿಂದ ಓದುತ್ತ ಬಂದಿದ್ದೇನೆ. ನನಗೆ ಬರುವ ಕೆಲವು ಆಲೋಚನೆಗಳನ್ನು ನಾನೂ ಏಕೆ ಬರೆದು ಕಳಿಸಬಾರದು ಎಂದು ಒಮ್ಮೆ ಅನಿಸಿತು. ನಾನು ಭಾಷಾಂತರಗಳನ್ನು ಮಾಡುತ್ತಿದ್ದೆ ಹೊರಟು ಸ್ವಂತ ಲೇಖನ ಬರೆದಿರಲಿಲ್ಲ. ಪ್ರಯತ್ನಿಸೋಣ ಎಂದು, ಆಗ ನನ್ನ ತಲೆಯಲ್ಲಿ ಓಡಾಡುತ್ತಿದ್ದ ಬೆರಕೆ ಕನ್ನಡದ ಬಗ್ಗೆಯೇ ಬರೆದು ಕಳಿಸಿ, ಮರೆತೂ ಬಿಟ್ಟಿದ್ದೆ. ಅದು ಪ್ರಕಟಗೊಂಡಾಗ ಸಂತೋಷವಾಯಿತು. `ಸುಧಾ'ಗೆ ನಾನು ಋಣಿ. ಸಮಯ ದೊರೆತಾಗ ಆಗಾಗ್ಗೆ ಬರೆಯುವುದು ಪ್ರಾರಂಭವಾದದ್ದು ಇಲ್ಲಿಂದಲೇ.